ಥಿಯೋಡರ್ ರೂಸ್ವೆಲ್ಟ್ ಜೂನಿಯರ್ ( ಅಕ್ಟೋಬರ್ 27, 1858 - ಜನವರಿ 6, 1919 ) ಒರ್ವ ಅಮೆರಿಕಾದ ರಾಜನೀತಿಜ್ಞ , ಲೇಖಕ, ಪರಿಶೋಧಕ, ಯೋಧ, ಮತ್ತು ನಿಸರ್ಗವಾದಿ ಹಾಗು ಇವರು 1901 ರಿಂದ 1909 ರವರೆಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ 26 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು 1901 ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ 25 ನೇ ಉಪಾಧ್ಯಕ್ಷರಾಗಿ ಮತ್ತು 1899 ರಿಂದ 1900 ರವರೆಗೆ ನ್ಯೂಯಾರ್ಕ್ನ 33 ನೆಯ ಗವರ್ನರ್ ಆಗಿ ಕೂಡ ಸೇವೆ ಸಲ್ಲಿಸಿದರು. ರಿಪಬ್ಲಿಕನ್ ಪಕ್ಷದ ನಾಯಕರಾಗಿದ್ದ ಇವರು 20 ನೇ ಶತಮಾನದ ಆರಂಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಪ್ರಗತಿಪರ ಯುಗಕ್ಕೆ ಚಾಲನೆ ನೀಡಿದರು . == ಉಲ್ಲೇಖಗಳು ==